Song Lyrics:
ಓ ಒಹೋ ಒಹೋ, ಓ ಒಹೋ ಒಹೋ
ಓ ಒಹೋ ಒಹೋ, ಓ ಒಹೋ ಒಹೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ
ಕಾಲಾ ಕ್ಷಣಿಕ ಕಣೋ, ಓ ಓ ಓ ...
ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ ।। ಪಲ್ಲವಿ ।।
ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ, ಹಡೆದವರೇ ದೈವ ಕಣೋ,
ಸುಖವಾದ ಭಾಷೆಯ ಕಲಿಸೋ, ಸರಿದ್ಯಾ ದಾರಿಗೆ ನಡೆಸೋ, ಸಂಸ್ಕ್ರತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯಏಟ, ಕಾಲ ಕ್ಷಣಿಕ ಕಣೋ, ಓ ಓ ಓ ...
ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ ।। ಚರಣ ೧ ।।
ಓ ಒಹ:ಹ: ಓ ಓಹ ಓಹ ಓ
ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ, ಭರವಸೆಯೇ ಮಗುವು ಕಣೆ
ಕಳಬೇಡ ಕೊಲ್ಲಲುಬೇಡ, ನೀ ಹಾಡು ಶಾಂತಿಯ ಹಾಡ, ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ, ಕಾಲಾ ಕ್ಷಣಿಕ ಕಣೋ, ಓ ಓ ಓ .. ।। ಚರಣ ೨ ।।
ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ
——————————————————————————
ಸಾಹಿತ್ಯ ಹಾಗೂ ಸಂಗೀತ: ಹಂಸಲೇಖ
ಹಿನ್ನೆಲೆ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಚಿತ್ರ: ಮಹಾ ಕ್ಷತ್ರಿಯ