ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ
ಅದೇ ಸ್ವಪ್ನಕ್ಕಾಗಿ ತಯಾರಾಗುತಾ
ಅದೇ ಸ್ವಪ್ನಕ್ಕಾಗಿ ತಯಾರಾಗುತಾ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ || ಪಲ್ಲವಿ ||
ಪ್ರತಿ ನಿನ್ನ ಸುಳಿವೂ ಸಹ
ನಿನ್ನಂತೆಯೇ ಕೋಮಲ
ಬೆಳದಿಂಗಳಲ್ಲಿ ಪಿಸು ಮಾತು ಸೇರಿ
ರಮಣೀಯ ಕೋಲಾಹಲ
ಪುನಾ ಬಂತು ಇರುಳು ಸವಾಲಾಗುತ
ಪುನಾ ಬಂತು ಇರುಳು ಸವಾಲಾಗುತ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ || ೧ ||
ಸದಾ ನಿನ್ನ ನಶೆಯಲ್ಲಿ ನಾ
ನಾ ನೊಬ್ಬ ಆಗಂತುಕ
ನಿನ್ನಿಂದ ದೂರ ಜೀವಂತವಾಗಿ
ನಾನಿರುವುದೇ ಕೌತುಕ
ನಿನ್ನ ನೋಡಿ ನೋಡಿ ಬಚಾವಾಗುತ
ನಿನ್ನ ನೋಡಿ ನೋಡಿ ಬಚಾವಾಗುತ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ
ಅದೇ ಸ್ವಪ್ನಕ್ಕಾಗಿ ತಯಾರಾಗುತಾ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ || ೨ ||
===
ಹಿಂದಿ ಮೂಲ:
ಚಿತ್ರ: ಮೇರೇ ಹಮ್ ದಮ್, ಮೇರೇ ದೋಸ್ತ್ (1968)
ಗಾಯನ: ಮಹಮ್ಮದ್ ರಫಿ
ಸಾಹಿತ್ಯ: ಮಜರೂ ಸುಲ್ತಾನ್ಪುರಿ
ಸಂಗೀತ: ಲಕ್ಷ್ಮೀಕಾಂತ್ - ಪ್ಯಾರೇಲಾಲ್
ರಾಗ: ಮಿಶ್ರ ಪೀಲೂ/ಗಾರಾ
ತಾಳ: ದೀಪಚಂದ್/ರೂಪಕ್
ಕನ್ನಡ ಅನುವಾದ:
ಸಾಹಿತ್ಯ: ಜಯಂತಿ ಕಾಯ್ಕಿಣಿ
ಗಾಯನ: ಎಸ್. ಬಾಲಸುಬ್ರಮಣ್ಯಂ
Friday, December 5, 2025
Kannada Translated Song, "ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ ..."
Wednesday, March 5, 2025
Kannada Translated Song, "ಬಾಳಿನ ಒಲವೇ ಬದುಕಿನ ಸಿರಿಯೇ, ಜೋ ಜೋ ಜೋ, ಆನಂದ ..." (Original: Marathi)
ಹಾಡು: "ಬಾಳಿನ ಒಲವೇ ಬದುಕಿನ ಸಿರಿಯೇ, ಜೋ ಜೋ ಜೋ, ಆನಂದ ..."
ಬಾಳಿನ ಒಲವೇ, ಬದುಕಿನ ಸಿರಿಯೇss
ಕಂದಾss
ಜೋ ಜೋ ಜೋ ಆನಂದ, ಕಂದss
ಜೋ ಜೋ ಜೋ ಆನಂದ, ಕಂದss
ಜೋ ಜೋ ಜೋ ಜೋ ಕಂದ||
ಆಗಸದಲ್ಲಿ ಪೂರ್ಣ ಚಂದಿರ
ನಲಿದಿರೆ ನೀನು ಮನೆಯೆ ಮಂದಿರ||
ಬೆಳಗಿರೆ ಅಲ್ಲಿ ಸೊಗದಲಿ ಚಂದ್ರ
ಕಿಲಕಿಲ ನಗುತಿರೆ ಚಂದss
ಕಂದsss ಆ ಆ ಆss
ಜೋ ಜೋ ಜೋ ಆನಂದ
ಕಂದss
ಜೋ ಜೋ ಜೋ ಆನಂದ ||೧||
ಬಾಳಿನ ಹಾದಿಯ ಪಯಣವದೆಲ್ಲ
ಸಾಗಲಿ ದೇವನ ಕರುಣೆ ಇದೆಲ್ಲ
ನಾಳಿನ ದುಗುಡದ ಮೋಡಗಳೆಲ್ಲ
ಕರಗಲಿ ಬೆಸೆಯುತ ಬಂಧ ||
ಕಂದsss ಆ ಆ ಆ ss
ಜೋ ಜೋ ಜೋ ಆನಂದ
ಕಂದss
ಜೋ ಜೋ ಜೋ ಆನಂದ ||೨||
ಬೆಚ್ಚನೆ ಹರಕೆಯ ಹೊದಿಕೆಯ ಒಳಗೇ
ಮಲಗಿರು ನಿದ್ದೆಯು ಬರಲೀ ಬಳಿಗೆ
ನಿನ್ನನು ಮುದ್ದಿಸಿ ಪಡೆಯುವ ಸೊಗವೇ
ನನ್ನಯ ಪರಮಾನಂದ||
ಕಂದsss ಆ ಆ ಆss
ಜೋ ಜೋ ಜೋ ಆನಂದ
ಕಂದss
ಜೋ ಜೋ ಜೋ ಆನಂದ
ಕಂದss
ಜೋ ಜೋ ಜೋ ಆನಂದ ||೩||
ಸಾಹಿತ್ಯ: ಅರ್ಚನಾ ಹೆಬ್ಬಾರ
Original Movie: Angai (Marathi, 1968)
Song:Ugi Ugi Re Ladiwala
Lyrics: ???
Music: Anant Bhatavdekar, Pandurang Amle