Friday, January 16, 2026

Kannada Devotional Song, "Bandhitu Makara Sankranthi ..." (ಕನ್ನಡ ಭಕ್ತಿಗೀತೆ, "ಬಂದಿತು ಮಕರ ಸಂಕ್ರಾಂತಿ ...")

ಬಂದಿತು ಮಕರ ಸಂಕ್ರಾಂತಿ
ಬಂದಿತು ಮಕರ ಸಂಕ್ರಾಂತಿ
ನೀಗಿತು ಎಲ್ಲಾ ಭ್ರಾಂತಿ
ಬಂದಿತು ಮಕರ ಸಂಕ್ರಾಂತಿ
ನೀಗಿತು ಎಲ್ಲಾ ಭ್ರಾಂತಿ
ನೀಡಿತು ಜಗಕೆ ಶಾಂತಿ
ಮೂಡಿತು ಅಮರ ಜ್ಯೋತಿ
ನೀಡಿತು ಜಗಕೆ ಶಾಂತಿ
ಮೂಡಿತು ಅಮರ ಜ್ಯೋತಿ
ಬಂದಿತು ಮಕರ ಸಂಕ್ರಾಂತಿ
ಬಂದಿತು ಮಕರ ಸಂಕ್ರಾಂತಿ           ।। ಪಲ್ಲವಿ ।।

ಜ್ಯೋತಿಯೇ ದೈವದ ಸಾಕ್ಷಾತ್ಕಾರ
ಆ ಆ ಆ ... ಆ ಆ ಆ
ಜ್ಯೋತಿಯೇ ದೈವದ ಸಾಕ್ಷಾತ್ಕಾರ
ಜ್ಯೋತಿಯೇ ಶಾಸ್ತನ ಅವತಾರ
ನಾಸ್ತಿಕರಲ್ಲೂ ನವ ಸಂಸ್ಕಾರ
ನಾಸ್ತಿಕರಲ್ಲೂ ನವ ಸಂಸ್ಕಾರ
ಆಸ್ತಿಕ  ಜನರ ಉದ್ಧಾರ
ಬಂದಿತು ಮಕರ ಸಂಕ್ರಾಂತಿ
ನೀಗಿತು ಎಲ್ಲಾ ಭ್ರಾಂತಿ                  ।। ೧ ।।

ಕೋಟಿ ಕೊರಳುಗಳ ಇಂಪಿನ ಆ ಧ್ವನಿ
ಸೃಸ್ಟಿಸೆ ಇಲ್ಲಿ ಹೊಸ ಧರಣಿ
ಕೋಟಿ ಕೊರಳುಗಳ ಇಂಪಿನ ಆ ಧ್ವನಿ
ಸೃಸ್ಟಿಸೆ ಇಲ್ಲಿ ಹೊಸ ಧರಣಿ
ಸ್ವರ್ಗವೇ ಇಲ್ಲಿ ಈ ಅವನಿ
ಸ್ವರ್ಗವೇ ಇಲ್ಲಿ ಈ ಅವನಿ
ಸ್ವಾಮಿಯೇ ನಮಗೆ ವರದಾನಿ
ಬಂದಿತು ಮಕರ ಸಂಕ್ರಾಂತಿ
ನೀಗಿತು ಎಲ್ಲಾ ಭ್ರಾಂತಿ
ನೀಡಿತು ಜಗಕೆ ಶಾಂತಿ
ಮೂಡಿತು ಅಮರ ಜ್ಯೋತಿ
ನೀಡಿತು ಜಗಕೆ ಶಾಂತಿ
ಮೂಡಿತು ಅಮರ ಜ್ಯೋತಿ
ಬಂದಿತು ಮಕರ ಸಂಕ್ರಾಂತಿ
ಬಂದಿತು ಮಕರ ಸಂಕ್ರಾಂತಿ            ।। ೨ ।।

--------------------------------------------------------------------------
ಆಲ್ಬಮ್: ಅಯ್ಯಪ್ಪ ದಿವ್ಯ ದರ್ಶನ
ಗಾಯನ: ಡಾ. ರಾಜಕುಮಾರ್
ಸಾಹಿತ್ಯ: ವಿಜಯ ನಾರಸಿಂಹ
ಸಂಗೀತ: ಉಪೇಂದ್ರ ಕುಮಾರ
ರಾಗ: ಮಧುವಂತಿ

Friday, December 5, 2025

Kannada Translated Song, "ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ ..."

ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ 
ಅದೇ ಸ್ವಪ್ನಕ್ಕಾಗಿ ತಯಾರಾಗುತಾ 
ಅದೇ ಸ್ವಪ್ನಕ್ಕಾಗಿ ತಯಾರಾಗುತಾ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ || ಪಲ್ಲವಿ ||

ಪ್ರತಿ ನಿನ್ನ ಸುಳಿವೂ ಸಹ 
ನಿನ್ನಂತೆಯೇ ಕೋಮಲ 
ಬೆಳದಿಂಗಳಲ್ಲಿ ಪಿಸು ಮಾತು ಸೇರಿ 
ರಮಣೀಯ ಕೋಲಾಹಲ 
ಪುನಾ ಬಂತು ಇರುಳು ಸವಾಲಾಗುತ 
ಪುನಾ ಬಂತು ಇರುಳು ಸವಾಲಾಗುತ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ  || ೧ ||

ಸದಾ ನಿನ್ನ ನಶೆಯಲ್ಲಿ ನಾ 
ನಾ ನೊಬ್ಬ ಆಗಂತುಕ 
ನಿನ್ನಿಂದ ದೂರ ಜೀವಂತವಾಗಿ 
ನಾನಿರುವುದೇ ಕೌತುಕ 
ನಿನ್ನ ನೋಡಿ ನೋಡಿ ಬಚಾವಾಗುತ 
ನಿನ್ನ ನೋಡಿ ನೋಡಿ ಬಚಾವಾಗುತ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ 
ಅದೇ ಸ್ವಪ್ನಕ್ಕಾಗಿ ತಯಾರಾಗುತಾ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ 
ಇಡೀ ಸಂಜೆ ಕಳೆದೆ ನಿನ್ನಾ ಕಾಯುತಾ  || ೨ ||
===
ಹಿಂದಿ ಮೂಲ:
ಚಿತ್ರ: ಮೇರೇ ಹಮ್ ದಮ್, ಮೇರೇ ದೋಸ್ತ್  (1968)
ಗಾಯನ: ಮಹಮ್ಮದ್ ರಫಿ 
ಸಾಹಿತ್ಯ: ಮಜರೂ ಸುಲ್ತಾನ್ಪುರಿ 
ಸಂಗೀತ: ಲಕ್ಷ್ಮೀಕಾಂತ್ - ಪ್ಯಾರೇಲಾಲ್ 
ರಾಗ: ಮಿಶ್ರ ಪೀಲೂ/ಗಾರಾ
ತಾಳ: ದೀಪಚಂದ್/ರೂಪಕ್ 

ಕನ್ನಡ ಅನುವಾದ:
ಸಾಹಿತ್ಯ: ಜಯಂತಿ ಕಾಯ್ಕಿಣಿ 
ಗಾಯನ: ಎಸ್.  ಬಾಲಸುಬ್ರಮಣ್ಯಂ 

Wednesday, March 5, 2025

Kannada Translated Song, "ಬಾಳಿನ ಒಲವೇ ಬದುಕಿನ ಸಿರಿಯೇ, ಜೋ ಜೋ ಜೋ, ಆನಂದ ..." (Original: Marathi)

 ಹಾಡು: "ಬಾಳಿನ ಒಲವೇ ಬದುಕಿನ ಸಿರಿಯೇ, ಜೋ ಜೋ ಜೋ, ಆನಂದ ..."

ಬಾಳಿನ ಒಲವೇ, ಬದುಕಿನ ಸಿರಿಯೇss
ಕಂದಾss
ಜೋ ಜೋ ಜೋ ಆನಂದ, ಕಂದss
ಜೋ ಜೋ ಜೋ ಆನಂದ, ಕಂದss
ಜೋ ಜೋ ಜೋ ಜೋ ಕಂದ||

ಆಗಸದಲ್ಲಿ ಪೂರ್ಣ ಚಂದಿರ
ನಲಿದಿರೆ ನೀನು ಮನೆಯೆ ಮಂದಿರ||
ಬೆಳಗಿರೆ ಅಲ್ಲಿ ಸೊಗದಲಿ  ಚಂದ್ರ
ಕಿಲಕಿಲ ನಗುತಿರೆ ಚಂದss
ಕಂದsss ಆ ಆ ಆss
ಜೋ ಜೋ‌ ಜೋ‌ ಆನಂದ
ಕಂದss   
ಜೋ ಜೋ‌ ಜೋ‌ ಆನಂದ ||೧||

ಬಾಳಿನ ಹಾದಿಯ ಪಯಣವದೆಲ್ಲ
ಸಾಗಲಿ ದೇವನ ಕರುಣೆ 
ಇದೆಲ್ಲ
ನಾಳಿನ ದುಗುಡದ ಮೋಡಗಳೆಲ್ಲ
ಕರಗಲಿ ಬೆಸೆಯುತ ಬಂಧ ||
ಕಂದsss ಆ ಆ ಆ ss
ಜೋ ಜೋ‌ ಜೋ‌ ಆನಂದ
ಕಂದss   
ಜೋ ಜೋ‌ ಜೋ‌ ಆನಂದ ||೨||

ಬೆಚ್ಚನೆ ಹರಕೆಯ ಹೊದಿಕೆಯ ಒಳಗೇ
ಮಲಗಿರು ನಿದ್ದೆಯು ಬರಲೀ ಬಳಿಗೆ
ನಿನ್ನನು ಮುದ್ದಿಸಿ ಪಡೆಯುವ ಸೊಗವೇ
ನನ್ನಯ ಪರಮಾನಂದ||
ಕಂದsss ಆ ಆ ಆss
ಜೋ ಜೋ‌ ಜೋ‌ ಆನಂದ
ಕಂದss   
ಜೋ ಜೋ‌ ಜೋ‌ ಆನಂದ
ಕಂದss   
ಜೋ ಜೋ‌ ಜೋ‌ ಆನಂದ ||೩||

ಸಾಹಿತ್ಯ: ಅರ್ಚನಾ ಹೆಬ್ಬಾರ

Original Movie: Angai (Marathi, 1968)
Song:Ugi Ugi Re Ladiwala
Lyrics: ???
Music:
Anant Bhatavdekar, Pandurang Amle


Friday, May 15, 2020

Kannada Song, "Sihiyaagu Maathinalli ..." ("ಸಿಹಿಯಾಗು ಮಾತಿನಲ್ಲಿ ..." - ಚಿತ್ರ: ಹಣಬಲವೋ ಜನಬಲವೋ)

 ಹಾಡು: ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ 

ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ
ರೋಷಾ ಬಿಡು ಬಿಡೂ ಸಾಕು
ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ
ರೋಷಾ ಬಿಡು ಬಿಡೂ ಸಾಕು

ಸೊಗಸಾದ ಹಾಲಿನಲ್ಲಿ ಹುಳಿಯನ್ನು ಹಿಂಡಿದಂತೆ
ಸವಿಯಾದ ಜೇನಿನಲ್ಲಿ ವಿಷಬಿಂದು ಜಾರಿದಂತೆ
ನಿನ್ನಂತ ಹೆಣ್ಣಿಗೆss
ನಿನ್ನಂತ ಹೆಣ್ಣಿಗೆ, ಕಲ್ಲಂತ ಮನಸಿದೇಕೆ

ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ
ರೋಷಾ ಬಿಡು ಬಿಡೂ ಸಾಕು

... ಆ ಆ ಆ  (ಆಲಾಪ) ...

ಹಣದಿಂದ ನೀನು ಎಂದೂ ಜನರನ್ನು ಕೊಳ್ಳಲಾರೆ
ಘನದಾಹದಿಂದ ಎಂದೂ ಸುಖವನ್ನು  ಹೊಂದಲಾರೆ
ವಾತ್ಸಲ್ಯ ತೋರದೆss
ವಾತ್ಸಲ್ಯ ತೋರದೆ ನೆಮ್ಮದಿಯ ಕಾಣಲಾರೆ

ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ
ರೋಷಾ ಬಿಡು ಬಿಡೂ ಸಾಕು
-----------------------------
ಚಲನಚಿತ್ರ: ಹಣಬಲವೋ ಜನಬಲವೋ (೧೯೮೧)
ಸಂಗೀತ: ಜಿ. ಕೆ. ವೆಂಕಟೇಶ
ಸಾಹಿತ್ಯ: ಚಿ. ಉದಯಶಂಕರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

Thursday, December 12, 2019

Translated Kannada Song, "Yaake KaNNe ..." (Original Movie: Chirag, "ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ ...")

ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ನಲ್ಮೆಯ ನೋಟದಲಿ, ಸಂಶಯ ಕಾಣಿಸಿತೇ
ನೋಡು ನೋಡು, ನನ್ನ ಅಂತರಾಳದ ಈ  ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ

ಅಳೆದಳೆದು ಅಳೆದಳೆದು ನೋಡೊ  ಹೆಣ್ಣಂಗಳ ತಕರಾರಿದು
ಪುರುಷ ಪ್ರಾಮಾಣಿಕನೇ ಏನಾದರಸು ಗೀತಾಸಂದೇಶವಿದು
ಅಳೆದಳೆದು ಅಳೆದಳೆದು ನೋಡು ಹೆಣ್ಣಂಗಳ ತಕರಾರಿದು
ಸ್ನೇಹದ ಸ್ಪರ್ಶದಲಿ, ಸೋಗಿನ ಸೋಂಕಿಹುದೇ, ಕೇಳು ಕೇಳು ನನ್ನ ಕಣ್ಣಿನಾಳದ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ

ಕಣ್ಣಲ್ಲಿ ಕಣ್ಣಿರಿಸಿ, ನನ್ನ ಎದೆಯಾಡಿಸುವ ಹುನ್ನಾರವೇ
ಮುತ್ತುಗಳ ಮುಂದೊಡ್ಡಿ, ಮುಂದೂಡಿ ಸೋಲಿಸೊ ಸನ್ನಾಹವೇ ... ಓಹೋಹೋ
ಕಣ್ಣಲ್ಲಿ ಕಣ್ಣಿರಿಸಿ, ನನ್ನ ಎದೆಯಾಡಿಸುವ ಹುನ್ನಾರವೇ
ಅಧರ ಅನುಭವದೇ , ಕಾಡಿದೆ ಎದೆಯಾಳ
ಆಡು ಆಡು, ಅಂತರಂಗದಾಳದ  ಜೊತೆ ಮಾತಾಡು

ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ನಲ್ಮೆಯ ನೋಟದಲಿ, ಸಂಶಯ ಕಾಣಿಸಿತೇ
ನೋಡು ನೋಡು, ನನ್ನ ಅಂತರಾಳದ ಈ  ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ

———-
Original Movie: Chirag
Music: Madan Mohan
Singer: Mohammed Rafi
Raga: Jhinjoti
Taala: Dadra

Kannada Lyrics: Hamsalekha


Kannada Song, "Kannanchina Ee Maathali ..." (ಚಿತ್ರ : ದಾರಿ ತಪ್ಪಿದ ಮಗ, "ಕಣ್ಣಂಚಿನ ಈ ಮಾತಲಿ ...")



ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ

ನವ ಯವ್ವನ ಹೊಂಗನಸಿನ ಮಳೆಬಿಲ್ಲು ತಂದಿದೆ
ನಸುನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ
ನೂರಾಸೆಯ ನೆಲೆಯಾಗಿದೆ
ಮಧುಚಂದ್ರದ ಮಧು ಮೈತ್ರಿಯ ನಿರೀಕ್ಷೆ ಅಲ್ಲಿದೆ

ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ

ಪ್ರತಿ ಪ್ರೇಮಿಯ ಬಾಳಲ್ಲಿಯು ಶುಭರಾತ್ರಿ ಹೊಂದಿದೆ
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೆ
ಸರಿ ಜೋಡಿಯ ಕಣ್ಣರಸಿದೆ
ಈ ಜೋಡಿಯು ಸವಿನೆನಪಲಿ ಜಗವನ್ನೇ ಮರೆತಿದೆ

ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
———-
ಚಿತ್ರ : ದಾರಿ ತಪ್ಪಿದ ಮಗ ೧೯೭೫
ರಚನೆ : ಚಿ. ಉದಯಶಂಕರ್   
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ : ಪಿ. ಬಿ. ಶ್ರೀನಿವಾಸ್
ತಾರಾಗಣ : ಡಾ. ರಾಜ್ ಕುಮಾರ್ ಮತ್ತು ಆರತಿ

Kannada Song, "Sharadhe Daye Thoridhe ..." (ಚಲನ ಚಿತ್ರ: ಮಲಯ ಮಾರುತ, "ಶಾರದೆ ದಯೆ ತೋರಿದೆ ...")


ಹ್ರೀಂ ಹ್ರೀಂ ಹ್ರೀಂ ಜಾಪತುಷ್ಠೆ….ಹಿಮರುಚಿ ಮುಕುಟೆ, ವಲ್ಲಕಿ ವ್ಯಘ್ರಹಸ್ತೆ
ಮಾತರ್ ಮಾತರ್ ನಮಸ್ತೇ ,ದಹ ದಹ ಜಡತಾಂ ,ದೇಹಿ ಬುದ್ಧಿಂ ಪ್ರಶಾಂತಾಂ
ವಿದ್ಯೆ,ವೇದಾಂತ ವೇದ್ಯೆ, ಪರಿಣತೆ ಪಠಿತೆ ,ಮೋಕ್ಷದೆ ಮುಕ್ತಿ ಮಾರ್ಗೆ
ಮಾರ್ಗತೀತ ಸ್ವರೂಪೆ ,ಭವಮವ ವರದಾ ,ಶಾರದೆ ಶುಭ್ರಹಾರೆ…………….||

ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ  || Pallavi ||

ಹಾಲ ಬೆಳಕಿನಲಿ, ಬಿಳಿಯ ಕಮಲದಲಿ, ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ, ಬೆಳ್ಳಿ ವೀಣೆಯನು ನುಡಿಸಿ
ನಿನ್ನ ಕಂಗಳಾ ಬೆಳಕನು, ನನ್ನ ಕಂಗಳಲಿ ತುಂಬಿದೆ
ನಿನ್ನ ಕಂಗಳಾ ಬೆಳಕನು, ನನ್ನ ಕಂಗಳಲಿ ತುಂಬಿದೆ

ಏಳು ಮಗುವೆ, ಮೇಲೇಳು ಎಂದು,  ಹೊಸ ಬಾಳ ತಂದೆಯಮ್ಮ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ

ಅಂಧಕಾರದಲಿ ನೊಂದು ಬಳಲುತಿರೆ, ಬಂದು ಕೈಯ್ಯ ಹಿಡಿದೇ
ಕಂದ ಏಕಳುವೆ ಮುಂದೆ ದಾರಿಯಿದೆ, ಎಂದು ನೀನೆ ನುಡಿದೆ
ತಂದೆ ತಾಯಿಯ ಪುಣ್ಯವೊ, ನಾನೆಂದೋ ಮಾಡಿದ ಪೂಜೆಯೂ
ತಂದೆ ತಾಯಿಯ ಪುಣ್ಯವೊ, ನಾನೆಂದೋ ಮಾಡಿದ ಪೂಜೆಯೂ
ಇಂದು ನಿನ್ನ ಕೃಪೆಯಿಂದ ನಾನು,  ಆನಂದ ಪಡೆದೆನಮ್ಮ

ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ
ಶಾರದೆ …………ಶಾರದೆ, ಶಾರದೆ …………ಶಾರದೆ,
=====
ಚಲನ ಚಿತ್ರ: ಮಲಯ ಮಾರುತ
ಸಂಗೀತ: ವಿಜಯ ಭಾಸ್ಕರ
ಸಾಹಿತ್ಯ: ಚಿ. ಉದಯಶಂಕರ
ಹಿನ್ನೆಲೆ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ (ಕೆ. ಜೆ. ಯೇಸುದಾಸ್)
ರಾಗ: ಮಲಯಾ ಮಾರುತ