Saturday, December 1, 2018

Kannada Song: "Banthidho Shrungaara Maasa ..." ("ಬಂತಿದೋ ಶೃಂಗಾರ ಮಾಸ ...")

Song Lyrics:
ಬಂತಿದೋ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ
ಎಂತು ತುಂಬಿದಾಕಾಶ
ಕಂಡವರನು ಹರಸಲೂ
ಬಂತಿದೋ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ ।।

ಗಂಗೆ ಯಮುನೆ ಕೂಡಿ ಹರಿದು
ಸಂಗಮ ಜಲಗಿಳಿದು ಕರೆದು
ಗಂಗೆ ಯಮುನೆ ಕೂಡಿ ಹರಿದು
ಸಂಗಮ ಜಲಗಿಳಿದು ಕರೆದು
ತಿಂಗಳ ನಗೆ ಮೀರಿ ಒರಿದು
ತಿಂಗಳ ನಗೆ ಮೀರಿ ಒರಿದು
ಬೇರೆ ಮಿರುಗು ನೀರಿದು
ಬಂತಿದೋ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ ।।

ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ಸಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವೇ
ದೀಪ ತೇಲಿ ಬಿಟ್ಟೆವು
ದೀಪ ತೇಲಿ ಬಿಟ್ಟೆವು
ಬಂತಿದೋ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ ।।
ಎಂತು ತುಂಬಿದಾಕಾಶ
ಕಂಡವರನು ಹರಸಲೂ
ಬಂತಿದೋ ಶೃಂಗಾರ ಮಾಸ ।।

Movie: Shrungara Maasa
Music Director: Rajeev Tharanath
Singer: Vani Jayaram
Lyrics: Dr. Da. Ra. Bendre (ಅಂಬಿಕಾತನಯದತ್ತ)