Kannada Movie Song: “Bhaavavemba Hoovu AraLi..." (ಕನ್ನಡ ಚಿತ್ರಗೀತೆ: " ಭಾವವೆಂಬ ಹೂವು ಅರಳಿ …")
Song Lyrics:
ಆಹಾ..., ಆಹಾ ...
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ ।। ಪಲ್ಲವಿ ।।
ದಗಮದ, ಗಾಮಾದ
ಸಮದನಿ, ಸಾದಾನಿ
ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ಒಲಿಯದ ದೇವರೇ ಇಲ್ಲ, ಗಾನವೇ ತುಂಬಿದೆ ಈ ಜಗವೆಲ್ಲಾ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ ।। ಚರಣ ೧ ।।
ದಾಸರು ಹರಿಯ ಸ್ಮರಣೆಯ ಮಾಡಿ, ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ, ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ, ಶಿವನ ಕಂಡರು ವಚನವ ಹಾಡಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ ।। ಚರಣ ೨ ।।
ವಿಶ್ವವೇ ಅರಳಿತು ಓಂಕಾರದಲಿ, ವಾಣಿಯ ವೀಣೆಯ ಝೇಂಕಾರದಲಿ
ವಿಶ್ವವೇ ಅರಳಿತು ಓಂಕಾರದಲಿ, ವಾಣಿಯ ವೀಣೆಯ ಝೇಂಕಾರದಲಿ
ಕುಣಿಯಿತು ನಾರದರ ಗಾನದಲ್ಲಿ, ತಣಿಯಿತು ಕೃಷ್ಣನ ಮುರಳಿಯಲಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ ।। ಚರಣ ೩ ।।
————————————————————————————————-
ಚಿತ್ರ: ಉಪಾಸನೆ
ಸಂಗೀತ: ವಿಜಯ ಭಾಸ್ಕರ
ಸಾಹಿತ್ಯ: ಚಿ. ಉದಯ ಶಂಕರ
ಹಿನ್ನೆಲೆ ಗಾಯನ: ವಾಣಿ ಜಯರಾಮ್
ರಾಗ: ಮಾಲ್ಕೌಂಸ್ (ಹಿಂದೋಳಮ್)
I was searching lyrics for this song and found this. Thanks a lot. I play keyboard as hobby. Played this song in keyboard. Here is the link, please keep yourself free some time and listen. You can also go through my YouTube channel for many more songs. https://youtu.be/1qbNuV24ULc
ReplyDeleteIf the link don't work, you can copy and check. I have no problem if you this as part of your blog.
ReplyDelete