Thursday, December 12, 2019
Kannada Movie Song, "Aakaasha Deepavu Neenu..." (ಕನ್ನಡ ಚಿತ್ರ: ಪಾವನ ಗಂಗಾ, "ಆಕಾಶ ದೀಪವು ನೀನು ...")
Karaoke ಸಾಹಿತ್ಯ:
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು || Pallavi ||
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದಾ ವೀಣೆಯನು ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು ನಾ ನಲಿದೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿವೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
—————————
ರಚನೆ: ಚಿ. ಉದಯಶಂಕರ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್
ಸಂಗೀತ: ರಾಜನ್ ಮತ್ತು ನಾಗೇಂದ್ರ
Subscribe to:
Post Comments (Atom)
No comments:
Post a Comment