Thursday, January 17, 2019

ಆಚೆ ಮನೆಯ ಸುಬ್ಬಮ್ಮನಿಗೆ ... (Folk Song)

ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ|
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ||

ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ|
ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ||

ಮಧ್ಯಾನಕೆಲ್ಲ ರವೆ ಉಂಡೆ
ಹುರುಳಿ ಕಾಳಿನ ಉಸಲಿ|
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ
ಐದೊ ಆರೋ ಇಡ್ಲಿ||

ರಾತ್ರಿ ಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು|
ಪಕ್ಕದ ಮನೆಯ ರಾಮೇ ಗೌಡರ
ಸೀಮೆ ಹಸುವಿನ ಹಾಲು ||

ಸಾಹಿತಿ: ಸಿ. ಆರ್. ಸತ್ಯ

No comments:

Post a Comment