Friday, January 4, 2019

Kannada Movie Song: "Hey Shilpi, Hey Kalabrahma ..." (ಕನ್ನಡ ಚಿತ್ರಗೀತೆ: "ಹೇ ಶಿಲ್ಪಿ, ಹೇ ಕಲಾಬ್ರಹ್ಮ ...")

Actual Lyrics:

ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ   ।। ಪಲ್ಲವಿ ।।                
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ  ಚೇತನವನ್ನು ವದನಕ್ಕೆ ಪೂಸಿರುವೆ            ।। ಚರಣ ೧ ।।
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ               ।। ಚರಣ ೨ ।।

Song Lyrics:
[ ಆ ... sss ... ಆ ... sss  (ಆಲಾಪ) ]

ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ  
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ                     

[ ಸ, ರಿ, ಗ, ಮ, ಪ, ದ, ನೀ, ಸ (ಸಂಗಡಿಗರ ಆಲಾಪ) ]

ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ  ಚೇತನವನ್ನು ವದನಕ್ಕೆ ಪೂಸಿರುವೆ            
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ

ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ              

ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ

ಚಲನಚಿತ್ರ: ರಾಗ ತಾಳ (೧೯೮೨)
ಸಂಗೀತ: ಎಮ್. ರಂಗ ರಾವ್
ಸಾಹಿತ್ಯ: ನಂದಗೋಪಾಲ ರೆಡ್ಡಿ
ಹಿನ್ನೆಲೆ ಗಾಯನ: ಕೆ. ಜೆ. ಯೇಸುದಾಸ್ ಮತ್ತೂ ಸಂಗಡಿಗರು
ರಾಗ: ???
ತಾಳ: ???

No comments:

Post a Comment