"ಹಾಡು ಹುಡುಕುವ ಹುಚ್ಚು": #೧೩ - ಮಾರ್ಚ್ ೧೫, ೨೦೧೯
*೦೧:*
ದಯೆಯಿರದ ದೀನ ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ
ಉದ್ದಂಡ ಅರುಳೆ ಸುಳಿಸುಳಿದು ಬಾ
*೦೨:*
ಕಣ್ಣಾ ಗೊಂಬೆ ನೀನಾದೆ
ನಿನ್ನಾ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೇ
ಬಂದಿದೆ ಕಣ್ಣಲ್ಲಿ ನಿದ್ದೆ
*೦೩:*
ತಾಯೀ ಒಡಲಿನ
ಕುಡಿಯಾಗಿ ಜೀವನ
ಮೂಡಿ ಬಂದು ಚೇತನ
ತಾಳಲೆಂದು ಅನುದಿನ
*೦೪:*
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ
*೦೫:*
ನಾದಲಹರಿಯ ತೇಲಾಡಿ
ಜಗವ ಮರೆವ
ಆನಂದ ರಾಗದಿ ನಲಿದಾಡಿ
*೦೬:*
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ
ವಿರಹದಾ ಗೀತೆಯ ಹಾಡಿದೆ ಕಿವಿಯಲಿ
*೦೭:*
ಬಿಸಿಲಾಗಲಿ ಮಳೆಯಾಗಲಿ
ನೆರಳಾಗಿ ನಾನು ಬರುವೆನು ಜೊತೆಗೆ
ಸವಿಮಾತಲಿ ಸುಖನೀಡುವೆ
ಎಂದೆಂದಿಗೂ ಹೀಗೆ
*೦೮:*
ಶೀಲಾ, ಶೀಲಾ, ಶೀಲಾ
<ಅರ್ಥವಾಗದ ಇಂಗ್ಲಿಷ್ ಶಬ್ದಗಳು, ಆಫ್ರಿಕದ ಕಾಡಿನಲ್ಲಿ >
*೦೯:*
ಕಣ್ಣಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೆ ನೀನೊಮ್ಮೆ ನೋಡು
ಸವಿಯಾದ ನುಡಿಯಲ್ಲಿ ಮೋಹವ ನೀ ತುಂಬಿ
ಒಲವಿನ ರಾಗದಿ ಹಾಡು
*೧೦:*
ಸತ್ಯ ಸುಂದರ ಜೀವನ ರಂಗ
ನಿತ್ಯ ನಿರ್ಮಲ ಅಂತರಂಗ
ಆನಂದ ನೀಡುವ ರಾಗ ತರಂಗ
ಅನುಪಮ ಯೋಗದ ಜೀವ ಗಂಗ
*೧೧:*
ಇನ್ನೇಕೆ ಭೀತಿ ಭಯವಿಲ್ಲ ನಿಮಗೆ
ವನಮೃಗಗಳು ಕ್ಷೇಮ
ಗಿಡಮರಗಳು ಕ್ಷೇಮ
No comments:
Post a Comment