Thursday, March 21, 2019

"ಹಾಡು ಹುಡುಕುವ ಹುಚ್ಚು" : #೧೪ - ಮಾರ್ಚ್ ೨೨, ೨೦೧೭

"ಹಾಡು ಹುಡುಕುವ ಹುಚ್ಚು" : #೧೪ - ಮಾರ್ಚ್ ೨೨, ೨೦೧೭

೦೧:
ರಾಮನಿಗೆ ಕೌಸಲ್ಯೆ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ
ಧನ್ಯನಾಗುವೆನಿಂದು ಕರುಣಿಸೋ ದಯಮಾಡಿ

೦೨:
ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ಜೀವ ಜೀವ ಮಿಲನ ದಿವ್ಯ ಸಂಗಮ
ಶರಧಿ ನದಿಯ ಪ್ರೇಮ ಘೋಷ ಸಂಭ್ರಮ

೦೩:
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಹರೆಯವು ಮೈತುಂಬ ಹಾಡಾಗಿ ಬಂತಾಗ
ಪ್ರಣಯದ ದೇವಿಯ ಎದುರಲಿ ಕಂಡಾಗ
ಹೃದಯದ ಕಾಣಿಕೆ ತಂದೇ ನಾನಾಗ

೦೪:
ಪದಗಳು ತುಂಬಿದ ಕವನವಿದಲ್ಲ
ಹೃದಯವೇ ಅಡಗಿದೆ ಇದಲಿ
ಅದರ ಒಡೆತನ ನಿನದೆ ಎಲ್ಲ
ಕೋಮಲ ಎಚ್ಚರವಿರಲಿ

೦೫:
ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು ಕಾಣಿಕೆಯಾಗಿ ತಂತು

೦೬:
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ನಿನ್ನ ನಾನು ನೋಡಲು ಕರುಣೆ ತುಂಬಿ ಕಾಡಲು
ಪೇಮದಿ ನಿನ್ನ ಸೇರಿದೆ, ನನ್ನಲೀ ನೀನಾದೆ

೦೭:
ಬಾಳೆoಬ ಕಡಲಲ್ಲಿ ನಾನು
ಕಂಡೆ ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ
ಸೆರೆಯಾಗಿ ಮನಸೋತು ನಡೆದೆ

೦೮:
ಓಡ್ತಿಯಾ, ಗುಡುಗುಡುಗು ಓಡ್ತಿಯಾ
ಕಣ್ಕಟ್ಟಿ ಬಂಡಿಯ ಬಿಡ್ತೀಯಾ
ನೋಡ್ತೀಯಾ ದುರುದುರುದು ನೋಡ್ತೀಯಾ
ಬೆರಳ್ಕೊಟ್ರೆ ಕೈಯ್ಯನ್ನೇ ನುಂಗ್ತಿಯಾ

೦೯:
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು

೧೦:
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲುಹಿತವಾಗಿ
ಓಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ

೧೧:
ಚೈತ್ರ ವಸಂತವೆ ಮಂಟಪ ಶಾಲೆ
ತಾರಾ ಲೋಕವೆ ದೀಪ ಮಾಲೆ
ಸದಾನುರಾಗವೆ ಸಂಬಂಧ ಮಾಲೆ
ಬದುಕೆ ಭೋಗದ ರಸ ರಾಸ ಲೀಲೆ

೧೨:
ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ

No comments:

Post a Comment